ಐಸ್ಸ್ಪೈಸ್ ಪ್ರೊಡಕ್ಷನ್ಸ್ (ಪ್ರೈ.) ಲಿ. ಲಾಂಛನದಡಿಯಲ್ಲಿ ಹಿಮಾಯತ್ ಖಾನ್ ನಿರ್ಮಿಸುತ್ತಿರುವ ಜಸ್ಟ್ ಆಕಸ್ಮಿಕ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಚಿತ್ರಕ್ಕೆ ಮಹಮದ್ ಹಸೀಬ್ ಛಾಯಾಗ್ರಹಣ, ಶಿವು ಜಮಖಂಡಿ ಸಂಭಾಷಣೆ, ಸಾಹಿತ್ಯ, ಸಂಗೀತ, ಸಹನಿರ್ದೇಶನ, ಹರಿಕೃಷ್ಣ ನೃತ್ಯ ತಮ್ಮ ಲಕ್ಷ್ಮಣ ಕಲೆ, ಎಂ. ಚಂದ್ರಪ್ಪ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ನಿರ್ದೇಶನದ ಹೊಣೆಯನ್ನು ಹಿಮಾಯತ್ ಖಾನ್ ಹೊತ್ತಿದ್ದಾರೆ. ಆದರ್ಶ ಮೆನನ್, ಬಾಲಕೃಷ್ಣ ಬರಗೂರು ಕಾರ್ಯಕಾರಿ ನಿರ್ಮಾಪಕರು.
ಪ್ರಮುಖ ತಾರಾಗಣದಲ್ಲಿ ವಿನೋದ್ಪಾಟೀಲ್, ಸಂಜನಾ, ತಿಲಕ್, ಸಚಿನ್ ಸುವರ್ಣ, ರಮೇಶ್ ಭಟ್, ಸುಧಾ ಬೆಳವಾಡಿ, ಮುಖ್ಯಮಂತ್ರಿ ಚಂದ್ರು, ಮೋಹನ್ ಜುನೇಜಾ, ಮುಂತಾದವರಿದ್ದಾರೆ.